Header Ads Widget

Responsive Advertisement

ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ಮಡಿಕೇರಿಯಲ್ಲಿ ಬೃಹತ್ ತಿರಂಗಾ ಯಾತ್ರೆ


ವೀರಸನ್ಯಾಸಿ ಸ್ವಾಮಿ ವಿವೇಕಾನಂದರ 158 ನೇ ಜಯಂತಿಯ ಪ್ರಯುಕ್ತ  ಎಬಿವಿಪಿ ನೇತೃತ್ವದಲ್ಲಿ  ವಿದ್ಯಾರ್ಥಿಗಳು  ಮಡಿಕೇರಿ ನಗರದ ಸರಕಾರಿ ಜ್ಯೂನಿಯರ್ ಕಾಲೇಜು ಮೈದಾನದಿಂದ ಕೊಡವ ಸಮಾಜದ ಸಭಾ ವೇದಿಕೆಯ ತನಕ 400 ಮೀಟರ್ ಉದ್ದದ ಬೃಹತ್ ತಿರಂಗಯಾತ್ರೆಯ ಮೂಲಕ    ವಿವೇಕಾನಂದರ ಸಂದೇಶಗಳನ್ನು ಸಾರಿದರು.  

ತಿರಂಗಯಾತ್ರೆಯ ನಂತರ ನಗರದ ಕೊಡವ ಸಮಾಜದ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.  ಕು.ಹರ್ಷಿತಾ ಶೆಟ್ಟಿಯವರ ಕಾರ್ಯಕ್ರಮ ನಿರೂಪಣೆ ಹಾಗೂ, ಕು. ರಕ್ಷಿತಾ ಆಳ್ವರವರ ಪ್ರಾರ್ಥನೆಯೊಂದಿಗೆ ದೀಪ ಬೆಳಗುವ ಮೂಲಕ  ವೇದಿಕೆ ಕಾರ್ಯಕ್ರಮವನ್ನು  ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಬಿವಿಪಿ ಮಂಗಳೂರು ವಿಭಾಗ ಪ್ರಮುಖರಾದ ಶ್ರಿ ಕೇಶವ ಬಂಗೇರರವರು ಉದ್ಘಾಟಿಸಿದರು. 

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನಾಡಿದ  ಎಬಿವಿಪಿ ಕೊಡಗು ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರೇಶ್ ಅಜ್ಜಣ್ಣನವರ್  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ  ವಿಚಾರಧಾರೆ ಹಾಗೂ ವಿವೇಕಾನಂದರ ಕನಸಿನ ಭಾರತದ ಕುರಿತು ವಿದ್ಯಾರ್ಥಿಗಳಿಗೆ  ತಿಳಿಸಿಕೊಟ್ಟರು. 

ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ ಕೇಶವ ಬಂಗೇರರವರು  ಮಾತನಾಡಿ ವಿವೇಕಾನಂದರವರ ಜೀವನ ಚರಿತ್ರೆ  ಮತ್ತು  ಸ್ವಾಮಿ ವಿವೇಕಾನಂದರ ಚಿಂತನೆಗಳು ಹಾಗೂ ಅವರ ಆಶಾದಾಯಕ ನುಡಿಗಳನ್ನು ಸಾಕಾರಗೊಳಿಸುವಂತೆ ಯುವಕರಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.

ಸಭಾಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದ ವಿ.ಹೆಚ್ .ಪಿ.   ಮುಖಂಡರಾದ ಚಿ.ನಾ. ಸೋಮೆಶ್ ಅವರು   ಶಕ್ತಿಯುತ ರಾಷ್ಟ್ರ ನಿರ್ಮಾಣದ ಜವಾ ಬ್ದಾರಿಯನ್ನು ಯುವಜನರು ತಮ್ಮ ಹೆಗಲ ಮೇಲೆ ಹೊರುವಂತೆ ಪ್ರೇರಣಾದಾಯಕ ನುಡಿಗಳನ್ನಾಡಿದರು. ಎಬಿವಿಪಿ ಮಡಿಕೇರಿ ನಗರ ಕಾರ್ಯದರ್ಶಿ ದರ್ಶನ್ ಅವರು ಸರ್ವರನ್ನು ವಂದಿಸಿದರು.


Search Coorg Media: Coorg's Largest Online Media Network